Saturday, May 9, 2009

ಹೊಸ ವರ್ಷದ ದಿನದಂದು ನಾ ಮಾಡಿದ ಅವಾಂತರ

ಅಂದು ಜನೆವರಿ ೧ ಹಿಂದಿನ ರಾತ್ರಿಯಷ್ಟೆ ಹನ್ನೂದು ಘಂಟೆವರೆಗು ಕೆಲಸವಿಲ್ಲದಿದ್ದರು ಆಫೀಸಿಗೆ ಬಂದು ಆಫೀಸಿನ ಗಾಡಿಯಲ್ಲೆ ಮನೆಗೆ ಹಿಂತಿರುಗಿ ೨ ಘ್ಂಟೆ ವರೆಗು ನನ್ನ ಪ್ರತಿ ದಿನದ ದಿನಚರಿಯಂತೆ ಹಿರಣ್ಣಯ್ಯನವರ ದೇವದಾಸಿಯನ್ನು ಓದುತ್ತಾ ಕೊನೆಗೂ ನಿದ್ರಾ ದೇವಿಯನ್ನು ಆವರಿಕೊಂಡು ಕನಸಿನ ಲೊಕದಲ್ಲಿ ಜಾರಿ ಹೋಗಿದ್ದೆ. ನಿದ್ರೆಯಿಂದ ಕಣ್ಣು ಬಿಟ್ಟಾಗ ಗಡಿಯಾರದ ಸಣ್ಣ ಮುಳ್ಳು ಹನ್ನೊಂದಕ್ಕೆ ಬಂದು ದೊಡ್ಡ ಮುಳ್ಳನ್ನು ಹನ್ನೆರಡಕ್ಕೆ ದೂಡುತ್ತಿತ್ತು. ಹಾಸಿಗೆಯಿಂದ ಮೇಲೆದ್ದು ದಿನದ ಕರ್ಮಗಳನ್ನೆಲ್ಲಾ ಮುಗಿಸಿದೆ. ಅಲ್ಲಿಯವರೆಗು ನಿದ್ರೆಯಲ್ಲಿಯೆ ಮುಳುಗಿದ್ದ ನನ್ನ ಜಂಗಮ ಘ್ಂಟೆ(ಮೋಬೈಲ್) ಒಮ್ಮಿಂದೊಮ್ಮೆಲೆ ಸಂದೆಶದ ಸುರಿಮಳೆಯನ್ನೆ ಸುರಿಸುತ್ತಾ ನನ್ನ ಕೈ ಸೇರಿತು. ಹತ್ತು ಹಲವಾರು ಶುಭಾಶಯಗಳ ಮಧ್ಯೆ ನನ್ನ ಅತ್ತಿಗೆಯ ಸಂದೆಶವು ಇತ್ತು. ಆ ಸಂದೆಶದ ಪ್ರಕಾರ ಅಣ್ಣ ಮತ್ತು ಅತ್ತಿಗೆ ದೇವಸ್ಥಾನಕ್ಕೆಂದು ೨೦ ಕಿ.ಮೀ ದೂರದಲ್ಲಿರುವ ಜೆ.ಪಿ. ನಗರಕ್ಕೆ ಹೋಗಿದ್ದರು. ಹಾಗೆ ಜಂಗಮ ಘಂಟೆಗೆ ಚಾರ್ಜರ್ ಪಿನ್ನನ್ನು ತೂರಿಸಿ ಟಿ.ವಿ ಯಲ್ಲಿ ಮುಖ ತೂರಿಸಿಕೊಂಡು ಕುಳಿತೆ. ಅಂತು ಇಂತು ಗಡಿಯಾರದ ಸಣ್ಣ ಮುಳ್ಳು ಹನ್ನೆರಡಕ್ಕೆ ದೊಡ್ಡ ಮುಳ್ಳಿನ ಜೊತೆಯಲ್ಲೆ ಬಂದು ನಿಂತಿತು. ಇನ್ನು ತಡ ಮಾಡುವದು ಬೇದ ಎಂದು ಬಾಯ್ಲರ್ ಸ್ವಿಚ್ ಹಾಕಿ ಮತ್ತೆ ಹತ್ತು ನಿಮಿಶ ಟಿವಿ ಯಲ್ಲೆ ಬರುತ್ತಿದ್ದ ನನ್ನ ನೆಚ್ಚಿನ ರವಿ ಬೆಳೆಗೆರೆ ಅವರ ಕವಿನಮನ ಕಾರ್ಯಕ್ರಮ ನೊಡಿ ನಂತರ ಹೊಸ ವರ್ಷದ ಮೊದಲೆ ಸ್ನಾನವನ್ನು ಮಾಡಿ ಬೀರುವಿನಲ್ಲಿರುವ ದೊಡ್ಡ ಕನ್ನಡಿಯಲ್ಲಿ ನನ್ನನ್ನೆ ನಾ ನೊಡುತ್ತ ಸ್ವಲ್ಪ ಕ್ರೀಮ್ ಹಾಗು ಪೌಡರ್ ಹಚ್ಚಿಕೊಂಡೆ. ಹಾಗೆ ಬಿಈರುವನ್ನು ತೆಗೆದು ನನ್ನ ಕರವಸ್ತ್ರ ತೆಗೆದುಕೊಳ್ಳುವಾಗ್ ಅದರ ಮೆಲಿದ್ದ ಅಣ್ಣನ ದೊಡ್ಡದಾದ್ ಪರ್ಫ್ಯುಮ್ ಬಾಟಲಿ ಮೇಲಿಂದ ಕೆಳ್ಗೆ ಬಿದ್ದು ಚೂರು ಚೂರಾಗಿ ಹೊಯಿತು. ಬಾಟಲ್ ಬಿದ್ದೆದ್ದೆ ತಡ ಇಡಿ ಮನೆಯೆಲ್ಲಾ ಘಮ ಘಮ ಪರಿಮಳದಿಂದ ತುಮ್ಬಿ ಹೋಯಿತು.

ಬಿದ್ದಿರುವ ಎಲ್ಲ ಗ್ಲಾಸ್ ಚೂರುಗಳನ್ನು ಆರಿಸಿ ಹೊರಗೆ ಚೆಲ್ಲಿದೆ. ಯಾವಗಲು ಕಸದ ಕೆಟ್ಟ ವಾಸನೆಯನ್ನೆ ತುಂಬಿಕೊಂಡು ಮೂಲೆ ಮುದುರಿಕೊಂಡು ಇರುತ್ತಿದ್ದ ಡಸ್ಟ್ ಬಿನ್ ಅವತ್ತು ಘಮ ಘಮ ಪರಿಮಳದಿಂದ ರಾರಾಜಿಸುತ್ತಿತ್ತು. ನಂತರ ರೂಮಿಗೆ ಬಂದು ಅಲ್ಲೆ ಇದ್ದ ಬಟ್ಟೆಯಿಂದ ಟೈಲ್ಸ ಗಳನ್ನು ತೊಳೆದೆ. ನೆಲ ವರೆಸಿದ ಬಟ್ಟೆ ಎಂದೆಂದು ಕಾಣದ ಅನುಭವಿಸದ ಆ ಘಮ ಘಮ ವಾಸನೆಯಿಂದ ಜಂಬದಲ್ಲಿ ಮುಳುಗಿ ಹೋಗಿತ್ತು. ಅಂತೂ ಈ ಎಲ್ಲಾ ಅವಾಂತರಗಳು ಮುಗಿಯುವಷ್ಟರಲ್ಲಿ ಹೊಟ್ಟೆ ತಾಳ ಹಾಕಲು ಶುರು ಮಾಡಿತು. ಊಟ ಮಾಡಿ ಮತ್ತೊಂದು ಪುಸ್ತಕದಲ್ಲಿ ತಲ್ಲೀನನಾದೆ.

ಕಾಲಿಂಗ್ ಬೆಲ್ ಶಭ್ದ ಮಾಡಿದಾಗ ಸಮಯ ೪ ಘ್ಂಟೆ ಆಗಿತ್ತು. ಬಿಸಿಲಲ್ಲಿ ಬಂದ ಅಣ್ಣನ ಮುಖ ನಾ ಮಾಡಿದ ಅವಾಂತರ ತಿಳಿದಾಗ ಇನ್ನಷ್ಟು ಕೆಂಪಗಾಯಿತು.
ಹೀಗೆ ವರ್ಷದ ಮೊದಲನೆ ದಿನಿನದಂದೆ ಬೈಗುಳ ತಿಂದ ನನಗೆ ೨೦೦೯ ಹೆಗಿರುತ್ತೋ... ನಾ ಕಾಣೆ.........................................

2 comments:

  1. ನಿಮ್ಮ ಕಥೆಯೆಲ್ಲವು ಚೆನ್ನಾಗಿದೆ ಶೇಷಗಿರಿಯವರೆ, ನಿಮ್ಮ ಬ್ಲಾಗ ನನಗೆ ಹೀಗೆ blogspot ಹುಡುಕುತಿದ್ದಾಗ ಸಿಕ್ಕಿತು. ತುಂಬ ಚೆನ್ನಾಗಿ ಬರೆಯುತ್ತೀರಾ ನೀವು.. ದಯವಿಟ್ಟು ಮುಂದುವರಿಸಿ... ನಿಮ್ಮ ಪ್ರೀತಿಯ ಶಾಲಿನಿ
    shalu.p85@gmail.com

    ReplyDelete