Friday, March 30, 2012

ಗೌರಿ

ಮೇರುಗಿರಿಯ ಉತ್ತುಂಗಕ್ಕೇರಿ ನಿಂತ ಅನುಭವವಿದು...

ಶಿವನ ಜಟೆಯ ಗಂಗೆಯಂತೆ ನನ್ನ ಬಾಳಿಗೆ ಬರುತಿಹಳು ಈ ಗೌರಿಯು....

ನನ್ನ ಬಾಳು ಬೆಳಗಲು ಬರುತಿಹಳು ಅನರ್ಘ್ಯರತ್ನ ದಂತೆ ಈ ಶ್ರೀಮತಿಯು....

ನಮ್ಮಿಬ್ಬರ ಭಾವ ಸಮ್ಮಿಲನಕ್ಕೆ ದೈವ ಬೆಸೆದ ಸುದಿನವಿದು...

ಶಿಲ್ಪ ಜೊತೆಗಿನ ನನ್ನ ಮದುವೆಗೆ ನಿಮ್ಮೆಲ್ಲರಿಗು ಆದರದ ಸ್ವಾಗತವಿದು...

ಹಾರೈಸಿ, ಆಶಿರ್ವದಿಸಿ.. ಇದೆ ನಮ್ಮ ಮದುವೆಗೆ ನಿಮ್ಮ ಉಡುಗೊರೆಯು...

Saturday, March 17, 2012

ಸುಮ್ಮನೆ ಮನಸಿಗೆಅನಿಸಿದ್ದನ್ನು ಗಿಚಿದ ಸಾಲುಗಳು ...

ಬಯಸರು ಯಾರು ಏನನ್ನು ನಮ್ಮಿಂದ...ಖುಷಿಯನ್ನು ಹಂಚೋಣ ಆದಷ್ಟು ನಮ್ಮ ಕೈ ಇಂದ....ಮಾಡಿರಿ ಪ್ರತಿಯೊಂದನ್ನು ಆ ದೇವರಿಗೆ ಸಮರ್ಪಿತ ಭಾವದಿಂದ........ :)

---------------------------------------------------
ಕವಿದ ಇರುಳ ಹಾದಿಯಲ್ಲಿ ಅವಳದೆ ಪ್ರತಿಬಿಂಬ.....:)

---------------------------------------------------
ಕಾರ್ಮೋಡದ ಕಪ್ಪು ಛಾಯೆಯಲ್ಲೂ ಪ್ರಿತಿಯೆಂಬ ಹೊಂಬೆಳಕು ತಂದವಳು ನೀನೇನಾ....?

---------------------------------------------------
ಕಣ್ಣಲ್ಲಿ ಕಣ್ಣಿಟ್ಟು ಕಣ್ ಮನವ ಸೆಳೆದವಳು....ಕಣ್ ಬಿಟ್ಟು ನೋಡಿದಾಗ ಮನದ ಮನೆಯಿಂದ ಮರೆಯಾದಳು......[:

---------------------------------------------------
ಕಳೆದು ಹೋದ ದಿನಗಳನು ನೆನೆಯುತಾ...ಮುಂಬರುವ ಸಿಹಿ ಕ್ಷಣಗಳ ಕಾಯುತ...ಕುಳಿತಿದೆ ಮನಸು ನಿನ್ನನೇ ನೆನೆಯುತಾ....
---------------------------------------------------
ಮನಸಿನ ಮನೆಯಲಿ..ಕನಸಿನ ಕಣ್ಣಿನಲಿ...ನಾನಿಂದು ಕುಳಿತಿರುವೆ..ಕಳೆದು ಹೋದ ನನ್ನ ಆ ದಿನಗಳ ನೆನೆಯುತಾ......
---------------------------------------------------
ಮನದಾಳದಲ್ಲಿ ಬಚ್ಚಿಟ್ಟಿರುವೆ ನಿನ್ನನ್ನ...ಮನಬಂದಂತೆ ಹರಿಹಾಯದಿರು ನಿನ್ನ ಮನವನ್ನ...ಮರೆಯದಿರು ಎಂದೆಂದಿಗು ನಿನಗಾಗಿ ಮಿಡಿಯುವ ಈ ಹೃದಯವನ್ನು...
---------------------------------------------------
ಕನಸೊಳಗಿನ ಕನಸನ್ನು ನನಸಾಗಿಸಲು ಬಂದಿರುವ ಕನಸೊಂದು... ಮನಸಿನಲಿ ತುಂಬಿ ಜೇವ ಹಿಂಡುತಿದೆ....!!
---------------------------------------------------
ಹೃದಯದ ಬಾಗಿಲಲ್ಲಿ ಭಾವನೆಗಳ ರಂಗೋಲಿ ಹಾಕಿರುವೆ..... ನೀ ಬಂದು ಪ್ರೀತಿಯ ಬಣ್ಣ ತುಂಬುವೆಯಾ?????
---------------------------------------------------