Saturday, May 9, 2009

ಹೊಸ ವರ್ಷದ ದಿನದಂದು ನಾ ಮಾಡಿದ ಅವಾಂತರ

ಅಂದು ಜನೆವರಿ ೧ ಹಿಂದಿನ ರಾತ್ರಿಯಷ್ಟೆ ಹನ್ನೂದು ಘಂಟೆವರೆಗು ಕೆಲಸವಿಲ್ಲದಿದ್ದರು ಆಫೀಸಿಗೆ ಬಂದು ಆಫೀಸಿನ ಗಾಡಿಯಲ್ಲೆ ಮನೆಗೆ ಹಿಂತಿರುಗಿ ೨ ಘ್ಂಟೆ ವರೆಗು ನನ್ನ ಪ್ರತಿ ದಿನದ ದಿನಚರಿಯಂತೆ ಹಿರಣ್ಣಯ್ಯನವರ ದೇವದಾಸಿಯನ್ನು ಓದುತ್ತಾ ಕೊನೆಗೂ ನಿದ್ರಾ ದೇವಿಯನ್ನು ಆವರಿಕೊಂಡು ಕನಸಿನ ಲೊಕದಲ್ಲಿ ಜಾರಿ ಹೋಗಿದ್ದೆ. ನಿದ್ರೆಯಿಂದ ಕಣ್ಣು ಬಿಟ್ಟಾಗ ಗಡಿಯಾರದ ಸಣ್ಣ ಮುಳ್ಳು ಹನ್ನೊಂದಕ್ಕೆ ಬಂದು ದೊಡ್ಡ ಮುಳ್ಳನ್ನು ಹನ್ನೆರಡಕ್ಕೆ ದೂಡುತ್ತಿತ್ತು. ಹಾಸಿಗೆಯಿಂದ ಮೇಲೆದ್ದು ದಿನದ ಕರ್ಮಗಳನ್ನೆಲ್ಲಾ ಮುಗಿಸಿದೆ. ಅಲ್ಲಿಯವರೆಗು ನಿದ್ರೆಯಲ್ಲಿಯೆ ಮುಳುಗಿದ್ದ ನನ್ನ ಜಂಗಮ ಘ್ಂಟೆ(ಮೋಬೈಲ್) ಒಮ್ಮಿಂದೊಮ್ಮೆಲೆ ಸಂದೆಶದ ಸುರಿಮಳೆಯನ್ನೆ ಸುರಿಸುತ್ತಾ ನನ್ನ ಕೈ ಸೇರಿತು. ಹತ್ತು ಹಲವಾರು ಶುಭಾಶಯಗಳ ಮಧ್ಯೆ ನನ್ನ ಅತ್ತಿಗೆಯ ಸಂದೆಶವು ಇತ್ತು. ಆ ಸಂದೆಶದ ಪ್ರಕಾರ ಅಣ್ಣ ಮತ್ತು ಅತ್ತಿಗೆ ದೇವಸ್ಥಾನಕ್ಕೆಂದು ೨೦ ಕಿ.ಮೀ ದೂರದಲ್ಲಿರುವ ಜೆ.ಪಿ. ನಗರಕ್ಕೆ ಹೋಗಿದ್ದರು. ಹಾಗೆ ಜಂಗಮ ಘಂಟೆಗೆ ಚಾರ್ಜರ್ ಪಿನ್ನನ್ನು ತೂರಿಸಿ ಟಿ.ವಿ ಯಲ್ಲಿ ಮುಖ ತೂರಿಸಿಕೊಂಡು ಕುಳಿತೆ. ಅಂತು ಇಂತು ಗಡಿಯಾರದ ಸಣ್ಣ ಮುಳ್ಳು ಹನ್ನೆರಡಕ್ಕೆ ದೊಡ್ಡ ಮುಳ್ಳಿನ ಜೊತೆಯಲ್ಲೆ ಬಂದು ನಿಂತಿತು. ಇನ್ನು ತಡ ಮಾಡುವದು ಬೇದ ಎಂದು ಬಾಯ್ಲರ್ ಸ್ವಿಚ್ ಹಾಕಿ ಮತ್ತೆ ಹತ್ತು ನಿಮಿಶ ಟಿವಿ ಯಲ್ಲೆ ಬರುತ್ತಿದ್ದ ನನ್ನ ನೆಚ್ಚಿನ ರವಿ ಬೆಳೆಗೆರೆ ಅವರ ಕವಿನಮನ ಕಾರ್ಯಕ್ರಮ ನೊಡಿ ನಂತರ ಹೊಸ ವರ್ಷದ ಮೊದಲೆ ಸ್ನಾನವನ್ನು ಮಾಡಿ ಬೀರುವಿನಲ್ಲಿರುವ ದೊಡ್ಡ ಕನ್ನಡಿಯಲ್ಲಿ ನನ್ನನ್ನೆ ನಾ ನೊಡುತ್ತ ಸ್ವಲ್ಪ ಕ್ರೀಮ್ ಹಾಗು ಪೌಡರ್ ಹಚ್ಚಿಕೊಂಡೆ. ಹಾಗೆ ಬಿಈರುವನ್ನು ತೆಗೆದು ನನ್ನ ಕರವಸ್ತ್ರ ತೆಗೆದುಕೊಳ್ಳುವಾಗ್ ಅದರ ಮೆಲಿದ್ದ ಅಣ್ಣನ ದೊಡ್ಡದಾದ್ ಪರ್ಫ್ಯುಮ್ ಬಾಟಲಿ ಮೇಲಿಂದ ಕೆಳ್ಗೆ ಬಿದ್ದು ಚೂರು ಚೂರಾಗಿ ಹೊಯಿತು. ಬಾಟಲ್ ಬಿದ್ದೆದ್ದೆ ತಡ ಇಡಿ ಮನೆಯೆಲ್ಲಾ ಘಮ ಘಮ ಪರಿಮಳದಿಂದ ತುಮ್ಬಿ ಹೋಯಿತು.

ಬಿದ್ದಿರುವ ಎಲ್ಲ ಗ್ಲಾಸ್ ಚೂರುಗಳನ್ನು ಆರಿಸಿ ಹೊರಗೆ ಚೆಲ್ಲಿದೆ. ಯಾವಗಲು ಕಸದ ಕೆಟ್ಟ ವಾಸನೆಯನ್ನೆ ತುಂಬಿಕೊಂಡು ಮೂಲೆ ಮುದುರಿಕೊಂಡು ಇರುತ್ತಿದ್ದ ಡಸ್ಟ್ ಬಿನ್ ಅವತ್ತು ಘಮ ಘಮ ಪರಿಮಳದಿಂದ ರಾರಾಜಿಸುತ್ತಿತ್ತು. ನಂತರ ರೂಮಿಗೆ ಬಂದು ಅಲ್ಲೆ ಇದ್ದ ಬಟ್ಟೆಯಿಂದ ಟೈಲ್ಸ ಗಳನ್ನು ತೊಳೆದೆ. ನೆಲ ವರೆಸಿದ ಬಟ್ಟೆ ಎಂದೆಂದು ಕಾಣದ ಅನುಭವಿಸದ ಆ ಘಮ ಘಮ ವಾಸನೆಯಿಂದ ಜಂಬದಲ್ಲಿ ಮುಳುಗಿ ಹೋಗಿತ್ತು. ಅಂತೂ ಈ ಎಲ್ಲಾ ಅವಾಂತರಗಳು ಮುಗಿಯುವಷ್ಟರಲ್ಲಿ ಹೊಟ್ಟೆ ತಾಳ ಹಾಕಲು ಶುರು ಮಾಡಿತು. ಊಟ ಮಾಡಿ ಮತ್ತೊಂದು ಪುಸ್ತಕದಲ್ಲಿ ತಲ್ಲೀನನಾದೆ.

ಕಾಲಿಂಗ್ ಬೆಲ್ ಶಭ್ದ ಮಾಡಿದಾಗ ಸಮಯ ೪ ಘ್ಂಟೆ ಆಗಿತ್ತು. ಬಿಸಿಲಲ್ಲಿ ಬಂದ ಅಣ್ಣನ ಮುಖ ನಾ ಮಾಡಿದ ಅವಾಂತರ ತಿಳಿದಾಗ ಇನ್ನಷ್ಟು ಕೆಂಪಗಾಯಿತು.
ಹೀಗೆ ವರ್ಷದ ಮೊದಲನೆ ದಿನಿನದಂದೆ ಬೈಗುಳ ತಿಂದ ನನಗೆ ೨೦೦೯ ಹೆಗಿರುತ್ತೋ... ನಾ ಕಾಣೆ.........................................

Friday, May 8, 2009

ಚುಟುಕು ಕವನಗಳು

ಕವನ
ದಿನವೆಲ್ಲಾ ಭೂಮಿಯನ್ನು ಬೆಳಗಿದ ಸೂರ್ಯ
ಮೋಡದಂಚಿನಲಿ ಮರೆಯಾಗುತ್ತಿರಲು

ಮನಸಿನ ಪುಟಗಳಲ್ಲಿ ಮೂಡಿದ ಪದ ಪುಂಜವೊಂದು
ಕವನವಾಗಿ ಹೊರಹೊಮ್ಮುತಿದೆ

ಈ ಮುಂಜಾವಿನಲಿ ಒಲಾಡುವ ಮರದ ಎಲೆಗಳ ಮಧ್ಯೆದಿಂದ
ತೂರಿಕೊಂಡು ಬಂದು ಸೆರುವ ಸೂರ್ಯನ ಕಿರಣಗಳ ಹಾಗೆ

ಮನಸಿನಲ್ಲಿಯ ಭಾವನೆಯೆಂಬ ಕಿರಣಗಳು ಶಬ್ಧಗಳ ರೂಪದಿಂದ
ಹೊರ ಬಂದು ಕವನವಾಗಿ ಮೂಡುತಿವೆ ಬಿಳಿ ಹಾಳೆಯ ಮೇಲೆ

ಚಂದ್ರ....
ದಿನವೆಲ್ಲಾ ಕಣ್ಣು ತುಂಬಾ ತುಂಬಿಕೊಂಡ ಸೂರ್ಯ
ಮೋದದಲ್ಲಿ ಮರೆಯಾದ

ಮನಿಸಿನ ತುಂಬಾ ತುಂಬಿಕೊಂಡ ಚಂದ್ರ ಅದೇ
ಮೋಡದಲ್ಲಿ ರಾರಾಜಿಸುತ್ತಿದ್ದಾನೆ

ನಕ್ಷತ್ರಗಳ ರಾಶಿಯ ಮಧ್ಯೆ ಹೊಳ್ಯೆಯುವ ಚಂದ್ರನಿಗೆ
ನೀನೆಲ್ಲಿಗು ಹೊಗದಿರು ಎಂದರೆ

ಮನಸಿನ ಮನೆಯಲ್ಲಿ ಅವಳನ್ನು ಕೂರಿಸಿ
ಅದೇ ಮೊಡದಲ್ಲಿ ಮರೆಯಾಗಿ ಹೋದ...ಮರೆಯಾಗಿ ಹೋದ...


ಕಾಯುತಿದೆ ನನ್ನೀ ಮನಸು
ಈ ಪುಟ್ಟ ಹೃದಯದ ಬಾಗಿಲಲಿ ಅವಳಿಗಾಗಿ
ಕಾಯುತಿದೆ ನನ್ನೀ ಮನಸು
ಅವಳಿಗಾಗಿ ಹೂವಿನ ಹಾಸಿಗೆಯನ್ನು ಹಾಸಿ ಕುಳಿತು
ಕಾಯುತಿದೆ ನನ್ನೀ ಮನಸು


ಲೇಖನಿಯ ಶಾಹಿಯು ತನ್ನಲ್ಲಿ ಮೂಡಿಸುವ ಸುಂದರ
ಶಬ್ಧಗಳನ್ನೊಳಗೊಂಡ ಕವಿತೆ ಗಾಗಿ ಹಾತೊರೆಯುತ್ತಿರುವ
ಶುಭ್ರ ಬಿಳಿಹಾಳೆಯಂತೆ ಕಾಯುತಿದೆ ನನ್ನೀ ಮನಸು

ಹೂವೊಂದು ಅರಳಿ ದುಂಬಿಗಾಗಿ ಕಾಯುತ್ತಿರುವಂತೆ
ಕಾಯುತಿದೆ ನನ್ನೀ ಮನಸು
ಸುಂದರ ನಾದವನ್ನು ಮಾಡುತ್ತ ಬಂದ ದುಂಬಿ
ತನ್ನಲ್ಲಿಯ ಮಧುವನ್ನು ಹೀರಿ ಹೋದ ದುಂಬಿಯ ಆಗಮನಕ್ಕಾಗಿ
ಹಾತೊರೆಯುತ್ತಿರುವ ಹುವಿನ ಹಗೆ
ಕಾಯುತಿದೆ ನನ್ನೀ ಮನಸು..ಕಾಯುತಿದೆ ನನ್ನೀ ಮನಸು...

ಪಕ್ಕದ್ ಮನೆ ಹುಡುಗಿ ಬಾರಮ್ಮ...

ಪಕ್ಕದ್ ಮನೆ ಹುಡುಗಿ ಬಾರಮ್ಮ...
ನಮ್ಮಮ್ಮಾ ಇಲ್ಲಾ..
ಪಕ್ಕದ್ ಮನೆ ಹುಡುಗಿ ಬಾರಮ್ಮ... [ಪ]

ಅಕ್ಕ ಪಕ್ಕದ ಜನರನು ನೋಡುತ
ಹೆಜ್ಜೆಯ ಮೇಲೊಂದೆಜ್ಜೆಯ ನಿಕ್ಕುತಾ
ಶುಕ್ರವಾರದಿಯ ಚಿತ್ರಮಂಜರಿ
ಮರೆಯದೆ ನೀನು ನೋಡಲು ಬಾರೆ..
ಪಕ್ಕದ್ ಮನೆ ಹುಡುಗಿ ಬಾರಮ್ಮ [1]

ಇಂದಿನ ಪೇಪರ್ ಓದಲು ಬಾರೆ
ಹೆಪ್ಪಿಗೆ ಮೊಸರನು ಕೇಳಲು ಬಾರೆ
ಕರೆಂಟು ಹೋದ ಸಮಯದಿ ನೇನು
ಕಡ್ಡಿ ಪೆಟ್ಟಿಗೆ ಕೇಳಲು ಬಾರೆ...
ಪಕ್ಕದ್ ಮನೆ ಹುಡುಗಿ ಬಾರಮ್ಮ [2]

ಇಂದಿಗು ನಾನೆ ಎಂದಿಗು ನಾನೆ
ನಾನ ಜನ್ಮಕು ನಾನೆ ಬಾರೆ
ತಂದೆ ತಾಯಿತ್ಯು ಒಪ್ಪದಿದ್ದರೆ
ಸೂಟ್ ಕೇಸ್ ಹಿಡ್ಕೊಂಡು ಬಸ್ಟ್ಯಾಂಡ್ ಗೆ ಬಾರೆ..[3]

ಸ್ನೇಹಿತರ ನೆನಪಿನಲಿ.....

ಮನಸಲೇ ಬೆರೆತು ಕಣ್ಣಿಂದ ದೂರಾಗಿರುವ
ಗೆಳೆಯರನು ಮನಸೇಕೊ ನೆನೆಯುತಿದೆ ಇಂದು
ಜೀವನದಲಿ ನೆನಪಿನ ಬುತ್ತಿಯನು ಹೊತ್ತುತರುವವರನ್ನು
ಮನಸೇಕೊ ನೆನೆಯುತಿದೆ ಇಂದು

ಅಂದು ನಾ ಗೆಳೆಯರ ಜೊತೆಯಲಿ ಕಳೆದ ಕ್ಷಣಗಳನು
ನನ್ನಿಂದ ಏಕೋ ಮರೆಯಲಾಗುತ್ತಿಲ್ಲ
ಅದರಿಂದಲೆ ಅನಿಸುತ್ತೆ ಕಣ್ಣಿಂದ ಸುರಿಯುತಿರುವ
ಕಂಬನಿಯ ಧಾರೆಯನು ನಿಲ್ಲಿಸಲಾಗುತ್ತಿಲ್ಲ.

ಜೊತೆಜೊತೆಯಲಿ ಬಂದು ಹೆಜ್ಜೆ ಹೆಜ್ಜೆಗಳನು ಬೆಸೆದು
ನನ್ನ ಹೃದಯದ ಮನೆಯಲ್ಲಿ ಮನೆ ಮಾಡಿ ಕುಳಿತವರ
ಚೆಲ್ಲಾಟ್ವನು ಮರೆಯಾಲಾಗುತ್ತಿಲ್ಲ.
ಮತ್ತೆ ಮತ್ತೆ ಮನಸೇಕೊ ನೆನೆಯುತಿದೆ ಇಂದು
ಅಂದು ಗೆಳೆಯರ ಜೋತೆಗಿದ್ದ ನೆನಪುಗಳನು.

ಹಿಂದ ನೋಡದ ಗೆಳತಿ.....



ವರಕವಿ ಬೇಂದ್ರೆ ಯವರ ಈ ಕವನದ ಬಗ್ಗೆ ಬರೆಯಲು ಪ್ರೆರೇಪಣೆ ಬಂದಿದ್ದು ಎರಡು ಕಾರಣಕ್ಕೆ, ಒಂದು ನಮ್ಮ ಸವಡಿಯವರ ನೀ ಹಿಂಗ ನೋಡಬ್ಯಾಡ ನನ್ನ ಲೇಖನ ಮತ್ತು ರತ್ನಮಾಲ ಪ್ರಕಾಶ್ ಅವರ ಗಾಯನ(ಇದೇ ಕವನದ್ದು).
ವರಕವಿ ಬೇಂದ್ರೆ ಯವರ ಒಂದೊಂದು ಕವನವು ವಿಭಿನ್ನ ವಾದ ಕಾವ್ಯ ಶೈಲಿಯನ್ನು ಹೊಂದಿರುತ್ತವೆ. ಮಕ್ಕಳಿಗಾಗಿ "ಪಾತರಗಿತ್ತಿ ಪಕ್ಕ" ಅತ್ಯಂತ ಮಾರ್ಮಿಕ ಅರ್ಥವನ್ನೊಳಗೊಂದ "ನಾಕು ತಂತಿ" ಮತ್ತು ಪುತ್ರ ಶೋಕ ಬಿಂಬಿಸುವ "ನೀ ಹಿಂಗ ನೋಡಬ್ಯಾಡ ನನ್ನ" ಹೀಗೆ ಇನ್ನು ಅನೇಕ ಕವನಗಳು ಬೇಂದ್ರೆಯವರ ಲೇಖನಿಯಿಂದ ಹೊರಬಂದು ಕನ್ನಡಿಗರ ಮನದಲ್ಲಿ ಮನೆ ಮಾಡಿ ಕೂತಿವೆ.
ಒಂದು ಹೆಣ್ಣಿನ ವಿರಹ ವೇದನೆಯ ಬಗ್ಗೆ, ಇನಿಯನ ಬಗ್ಗೆ ಅವಳಲ್ಲಿರುವ ಭಾವನೆಯನ್ನು ಹೊತ್ತು ತಂದ ಕವನವೇ ಈ "ಹಿಂದ ನೋಡದ ಗೆಳತಿ" ಕವನ. ಬೇಂದ್ರೆ ಯವರು ಈ ಕವನ ಬರೆಯಲು ಸ್ಪೂರ್ತಿ ಎನು? ಎಂಬುದರ ಹಿಂದೆ ಒಂದು ಸ್ವಾರಸ್ಯ ವಾದ ಕಥೆ ಇದೆ (ನಾನು ಯೆಲ್ಲೊ ಓದಿದ ನೆನಪು).
ಬೇದ್ರೆಯವರು ಸಮಯ ಸಿಕ್ಕಗಲೆಲ್ಲಾ ತಮ್ಮ ಸ್ನೇಹಿತ ಎನ್ಕೆ ಕುಲಕರ್ಣಿ(ನಾಣಿ) ಯವರ ಮನೆಗೆ ಹೋಗಿ ಹರಟೆ ಹೊಡೆಯುತ್ತಿದ್ದರು ಅವರ ಮನೆಗೆ ಹೊದಾಗಲೆಲ್ಲ ಅವ್ರ ಮೆಚ್ಚಿನ ಚಾ-ಚೂಡಾ ವನ್ನು ನಾಣಿಯವರ ಮನೆಯಲ್ಲಿ ಸವಿಯುತ್ತಿದ್ದರು. ಒಂದು ದಿನ(ಜುಲೈ 7 ಮಂಗಳವಾರ 1947) ಬೇಂದ್ರೆಯರು ನಾಣಿಯವರ ಮನೆಯಲ್ಲಿ ಕುಳಿತಿರುವಾಗ ಅವ್ರಿಗೆ ಗೋಡೆಯ ಮೇಲಿರುವ ಒಂದು ಚಿತ್ರ ಕಣ್ಣಿಗೆ ಬೀಳುತ್ತೆ. ಅದು ಒಬ್ಬಳು ಗೋಪಿಕೆ ಯು ಕೃಷ್ಣನನ್ನೆ ನೋಡುತ್ತ ಕುಳಿತ ಚಿತ್ರಪಟ. ಅಲ್ಲಿಂದ ಮನೆಗೆ ಬಂದ ಬೇಂದ್ರೆಯವರು ಆ ಗೋಪಿಕೆಯ ಮನದಲ್ಲಿಯ ಭಾವನೆಗಳನ್ನು ಶಬ್ಧಗಳ ರೂಪದಲ್ಲಿ ಬಿಡಿಸಿಟ್ಟಾಗ ಮೂಡಿಬಂದ ಕವಾವನವೇ ಈ "ಹಿಂದ ನೋಡದ ಗೆಳತಿ" ಕವನ.
ಕವನದ ಪ್ರತಿಯೊಂದು ಸಾಲಿನಲ್ಲು ಬೇಂದ್ರೆಯವರ ಸರಳ ಪದಗಳ ರಚನೆ ಮತ್ತು ಓದುಗನ ಮನಸ್ಸನ್ನು ಒಂದು ಕಲ್ಪನಾ ಲೋಕಕ್ಕೆ ಒಯ್ಯುವ ಮಾಯಶಕ್ತಿಯನ್ನು ಎತ್ತಿ ತೋರಿಸುತ್ತದೆ.
ಪೂರ್ತಿಯಾಗಿ ಕವನವನ್ನು ಓದಿದದ ನಂತರ ನನಗನಿಸಿದ್ದು.....ಬೇಂದ್ರೆಗೆ ಬೇಂದ್ರೆಯವರೆ ಸಾಟಿ.... ಎನಂತಿರಾ?

ಸ್ವಾರ್ಥ v/s ತ್ಯಾಗ

ಸರಿಸುಮಾರು ಸಂಜೆಯ ಆರು ಗಂಟೆಯ ಸಮಯ. ದಿನವೆಲ್ಲಾ ಭೂಮಿಯನ್ನು ಸುಟ್ಟು- ಸುಟ್ಟು ಕೊನೆಗೆ ತಾನೇ ತಂಪಾಗಿ ಭೂಮಿಯನ್ನು ತಂಪು ಮಾಡಿದ ಸೂರ್ಯ ಭೂಮಿಗೊಂದು ನಮನ ಸಲ್ಲಿಸಿ ಮೋಡದ ಮರೆಯಲ್ಲಿ ಕೊನೆಯಾಗುತ್ತಿದ್ದಾನೆ. ಏಲ್ಲಾ ಜನರು ತಮ್ಮ ದಿನದ ಕೆಲಸ ಮುಗಿಸಿ ಮನೆಗೆ ಹೊರಡಲು ಹತೊರೆಯುತ್ತಿದ್ದಾರೆ. ಪಕ್ಷಿ ಸಂಕುಲವೆಲ್ಲಾ ದಿನದ ಪಯಣ ಮುಗಿಸಿ ಗುಡಿಗೆ ಹೋಗುತ್ತಾ ಚಿಲಿ-ಪಿಲಿ ನಾದವನ್ನು ಹೊರಡಿಸಿವೆ. ಇವೆಲ್ಲದರ ಮಧ್ಯ ಮೆತ್ತನೆ ಹುಲ್ಲುಹಾಸಿನ ಮೇಲೆ ಕುಳಿತ ಅವಳ ಮುಖದಲ್ಲಿ ಯಾರನ್ನೋ ನಿರೀಕ್ಷಿಸುವ ಭಾವವಿತ್ತು. ಚಂದ್ರನ ಮುಖದಂತಿರುವ ಅವಳನ್ನು ದೇವರು ತುಂಬಾ ಸಮಯ ತಗೆದುಕೊಂಡು ಸ್ರಷ್ಟಿಸಿದ್ದಾನೆ. ಅನಿಸುತ್ತೆ. ಅವಳ ಆ ನೀಳಕಾಯ, ಅವಳ ಮುಂಗುರುಳು ಅವಳ ಕೆನ್ನೆಗೆ ಮುತ್ತಿಡುತ್ತಿದ್ದರೆ ಅವಳ ಅವಳ ಉದ್ದವಾದ ರೇಶ್ಮೆಯಂತಿರುವ ಕೂದಲುಗಳು ತುದಿ ಮಾತ್ರ ತಾನು ಯೆನು ಕಡಿಮೆ ಅಂತ ಪಾರ್ಕಿನ ಹುಲ್ಲುಹಾಸಿಗೆ ಮುತ್ತಿಡುತ್ತಿತ್ತು. ಅ ಸೌಂದರ್ಯವನ್ನು ಸವಿಯಲು ಮನಸ್ಸಿದ್ದರೂ, ಅವಲ ಮನಸ್ಸು ಬೇರೆ ಯಾರದೋ ಅಗಮನವನ್ನು ನಿರೀಕ್ಷಿಸುತ್ತಿತ್ತು.
ಅವನೇ ಅವಳ ಪ್ರಾಣ, ಜೀವ, ಜೀವದ ಗೆಳೆಯ ಗೌತಮ್.
...................................................
ಹಸಿರು ಹುಲ್ಲು ಹಾಸಿನ ಮೇಲೆ ಬಂಗಾರದ ಬಣ್ಣದ ಆ ಕೈಗಳನ್ನು ಯಾರೋ ಮುಟ್ಟಿದಂತಾಗಿ, ಗೌರಿ, "ಯಾರು? ಓ ಗೌತಮ್!!" ಎಂದು ನುಡಿದಳು. ಗೌತಮ್ ಹುಂ... ಎಂದ. ಯಾಕೆ ಗೌರಿ ಕೋಪನಾ? ಅಂದ. ಗೌರಿ... " ಗೌತಮ್, ನೀನಿಲ್ಲದೆ ಒಂದೊಂದು ಕ್ಷಣವು ಒಂದೊಂದು ಯುಗ ಎನಿಸುತ್ತದೆ: ಈ ಕುರುಡಿಯ ಮೇಲೆ ನಿನಗೆ ಅದೆಷ್ಟು ಪ್ರೀತಿ?
"ಗೌರಿ, ಪ್ಲೇಸ್ ಇನೊಂದ್ಸಲ ನೀನು ನಿನ್ನನು ಕುರುಡಿ ಎನ್ನಬೇಡ, ನಾನಿಲ್ಲವೆ ನಿನ್ನ ಕಣ್ಣಾಗಿ?"
ಅದೆಷ್ಟೋ ಹೊತ್ತು ಅವಳು ಅವನ ಮಡಿಲಲ್ಲಿ ಮಗುವಾಗಿ ಹೋದಳು. ಸೂರ್ಯ ಪೂರ್ಣವಾಗಿ ಭೂತಾಯಿಯ ಮದಿಲಿನಲ್ಲಿ ಲೀನವಾಗಿ ಕತ್ತಲೆಂಬ ಗೆಳೆಯನಿಗೆ ಅನುಮತಿ ನೀಡಿದ್ದ. ಮೆಲ್ಲಗೆ ಗೌತಮ್ ಗೌರಿಯನ್ನು ಎಬ್ಬಿಸಿ: " ಗೌರಿ, ನನನ್ಗೆ ಹೊಸ್ಟೆಲ್ಗೆ ಹೋಗೋಕೆ ಲೇಟ್ ಆಗುತ್ತೆ, ಎದ್ದೇಳು" ಎಂದ್ ಹೇಳಿ ಅವಳನ್ನು ತನ್ನ ತೋಳತಕ್ಕೆಯಲ್ಲೊಮ್ಮೆ ಬಿಗಿದಪ್ಪಿ, ಕೈ ಹಿಡಿದು ಪಾರ್ಕಿನಿಂದ ಹೊರಬಂದು ಮೊಬೈಕಿನ ಮುಖಕ್ಕೆ ಕೀಲಿ ಸಿಕ್ಕಿಸಿ, ಕಾಲಲ್ಲಿ ಗೇರ್ ಬದಲಿಸುತ್ತ ಬೈಕಿಗೆ ಹೋಗಲು ಅಜ್ಞೆ ಮಾಡಿದ. ಸರಿಸುಮಾರು ೮ ಗಂಟೆಗೆ ಗೌತಮ್ ಮತ್ತು ಗೌರಿಯನ್ನು ಹೊತ್ತ ಬೈಕು ವಿಜಯನಗರದ " ವರ್ಕಿಂಗ್ ವುಮೆನ್ಸ್ ಹೊಸ್ಟೆಲ್" ಬಾಗಿಲಿನ ಹತ್ತಿರ ಬಂದು ನಿಂತಿತು.
...................................................
ಗೌರಿ ತನ್ನ ತಂದೆ-ತಾಯಿಯನ್ನು ಚಿಕ್ಕ ವಯಸ್ಸಿನಲ್ಲೆ ಕಳೆದುಕೊಂಡ ನತದ್ರುಷ್ಟೆ. ಗೆಳತಿಯ ಸಹಯದಿಂದ ದೂರದುರಿನಿನ್ದ ಬೆಂಗಳೂರೆಂಬ ಮಾಯನಗರಿಗೆ ಬಂದು ತನ್ನ ಜೀವನೋಪಾಯಕ್ಕೆಂದು ಪ್ರೈವೆಟ್ ಕಂಪನಿಯಲ್ಲಿ ಟೆಲಿಫೋನೆ ಅಪೋರೇಟರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಅವಳು ಬೆಂಗಳೂರಿಗೆ ಬಂದು ಸುಮಾರು ಒಂದು ವರ್ಷವಾಯಿತು. ಈ ಒಂದು ಮಾಯನಗರಿಯಲ್ಲಿ ಅವಳ ಪಾಲಿಗೆ ತನ್ನವರೆಂದು ಇರುವರು ಗೌತಮ್ ಮತ್ತು ಅವಳ ಪ್ರಾಣ ಸ್ನೇಹಿತೆ ಗಾಯತ್ರಿ. ಗೌರಿ ಮತ್ತು ಗಾಯತ್ರಿ ಒಂದೆ ಊರಿನವರು ಮತ್ತು ಒಟ್ಟಿಗೆ ಓದಿದವರು. ಗೌರಿ ಸುಮಾರು ೧೦ ವರ್ಷದವಳಿದ್ದಾಗ ಅಪಘಾತ ಒಂದರಲ್ಲಿ ತನ್ನ ಕಣ್ಣುಗಳನ್ನು ಕಳೆದುಕೊಂಡಳು, ಜೊತೆಗೆ ತನ್ನ ತಂದೆ-ತಾಯಿಯನ್ನು...!. ಅನಾಥೆಯಾದ ಗೌರಿ ಊರಲ್ಲೆ ತನ್ನ ಸಂಬಂಧಿಕರ ಮನೆಯಲ್ಲಿ ೭-೮ ವರ್ಷ ಇದ್ದು ನಂತರ ಗಾಯತ್ರಿಯ ಸಹಾಯದಿಂದ ಬೆಂಗಳೂರಿಗೆ ಬಂದು ಜೀವನ ನೆಡೆಸುತ್ತಿದ್ದಾಳೆ. ಗಾಯತ್ರಿ ಮತ್ತು ಗೌರಿಯ ಸ್ನೇಹ ಬಹಳ ಗಾಢವಾದದ್ದು, ಮತ್ತು ಇಬ್ಬರು ಒಂದೇ ಹೊಸ್ಟೆಲ್ ನಲ್ಲಿ, ಒಂದೇ ರೂಮಿನಲ್ಲಿ - ಒಂದೇ ಜೀವ, ಎರಡು ದೇಹದಂತೆ ಇರುವರು. ಗಾಯತ್ರಿಯು ಕೂಡ ಬೆಂಗಳೂರಿನಲ್ಲೆ ಒಳ್ಳೆ ಕೆಲಸದಲ್ಲಿದ್ದಾಳೆ.
ಗೌತಮ್ ರೂಮಿನಲ್ಲಿ ಮಲಗಿದ್ದಾನೆ. ಆದರೆ ಎಷ್ಟೆ ಪ್ರಯತ್ನಿಸಿದರೂ ನಿದ್ದೆ ಅವನನ್ನು ಅವರಿಸಲಿಲ್ಲ. ಮನಸ್ಸಲೆಲ್ಲಾ ಗೌರಿಯ ಛಾಯೆ, ಅವಳ ನೆನಪಲ್ಲಿ ಅವನಿಗೆ ನಿದ್ದೆಗೆ ಜಾಗವೇ ಇರಲಿಲ್ಲ. ಅವಳಿಲ್ಲದೇ, ಕೊನೆಗೆ ಮಹಡಿಯ ಮೇಲೆ ಬಂದು ಮಲಗಿದ. ಗರಿ ಬಿಚ್ಚಿದ ನವಿಲಿನಂತಿರುವ ನಕ್ಷತ್ರ ರಾಶಿಯನ್ನು ತನ್ನ ಮಡಿಲಲ್ಲೆ ಬಚ್ಚಿಟುಕೊಂಡು ನಿಂತ ಆಕಾಶವನ್ನೇ ನೋಡುತ್ತಾ ಮಲಗಿದ.
ಗೌತಮ್ ಗೌರಿಯನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ. ಅವನ ಮೇಲೆ ಆಕಾಶದಲ್ಲಿಯ ಆ ನಕ್ಷತ್ರ ಪುಂಜದಷ್ಟೇ ವಿಶಾಲ, ಸುಂದರ... ಆದರೆ ಆ ದೇವರನ್ನು ಅವನು ನಿಂದಿಸುವುದು ಒಂದೇ ವಿಷಯಕ್ಕೆ. ಎಲ್ಲಾ ಕೊಟ್ಟು ತನ್ನ ಪ್ರೇಯಸಿಯ ಕಣ್ಣನು ಮಾತ್ರ ಕಿತ್ತಿಕೊಂಡಿದ್ದನು ಆ ದೇವರು. ಆದರೂ ಅವನಿಗೆ ತಾನೇ ತನ್ನ ಗೌರಿಯ ಕಣ್ಣಾಗುವ ಆಸೆ. ಅಂತೆಯೇ ಅವನು ಗೌರಿಗೆ ಯಾವಾಗಲು ಹೇಳುತ್ತಿದ್ದ ಮಾತು " ಗೌರಿ, ನೀನು ಯಾವತ್ತು ದ್ರುಷ್ಟಿಹೀನಳಲ್ಲ. ಎಕೆಂದರೆ ನಿನ್ನ ಕಣ್ಣಾಗಿ ನಾನಿರುವೆ".
...................................................
ಈ ಪ್ರಿತಿಯಲ್ಲಿರುವವರ ಬದುಕೆ ಹೀಗೆ ... ಎಲ್ಲವು ಮರೆಯಲಾಗುವದಿಲ್ಲ ಎಲ್ಲವು ನೆನೆಯಲಾಗುವದಿಲ್ಲ ಯಾವ ಜನ್ಮದ ನಂಟೋ ಏನೋ ಗೌರಿ ಮತ್ತು ಗೌತಮ್ ಇಬ್ಬರ ಹೃದಗಳು ಕಳಚಿಹೋಗಲಾರದಷ್ಟು ಬೆಸೆದು ಹೋಗಿವೆ. ಭೇಟಿಯಾದ ಸ್ವಲ್ಪ ದಿನದಲ್ಲೇ ಇಬ್ಬರ ಮನಸುಗಳ ನಡುವೆ ಪ್ರೀತಿಯೆಂಬ ಸುಬಧ್ರವಾದ ಸೇತುವೆ ಯೊಂದು ನಿರ್ಮಾಣವಾಗಿದೆ. ಹೀಗೆ ಅವರ ಪ್ರೀತಿಯ ಪಯಣ ಸಾಗುತ್ತಿರಲು, ಗೌತಮ್ ಕೆಲಸದ ಮೇಲೆ ಬೇರೆ ಊರಿಗೆ ಹೋಗಬೇಕಾಗಿ ಬಂದು ಗೌರಿಗೆ ಒಂದು ವಾರದ ನಂತರ ವಾಪಸ್ಸಾಗುವೆನೆಂದು ಹೇಳಿ ಹೊರಟು ಹೋಗುತ್ತನೆ. ಗೌತಮ್ ಹೋಗಿ ಎರಡು ದಿನಗಳ ನಂತರ ಗೌರಿಯ ಮೊಬೈಲ್ ಗೊಂದು ಕರೆ ಬಂತು. ಅತ್ತ ಕಡೆಯಿಂದ "ಮೆಡಮ್ ನಾನು ಡಾ. ರವಿಕುಮಾರ್ " ಅಂತಾ ಹೇಳಿದಾಗ ಹೇಳಿ ಡಾಕ್ಟರ್ ಎಂದಳು. ಸುಮಾರು ಎರಡು ತಿಂಗಳ ಹಿಂದೆ ಅವಳು ಗೌತಮ್ ನೊಡನೆ ತನ್ನ ಕಣ್ಣು ಪರೀಕ್ಷೆ ಗೆಂದು ಹೋದಾಗ ಅವಳ ದೃಷ್ಟಿ ಬರುವದರ ಬಗ್ಗೆ ಹೇಳಿದ್ದರು. "ಮೇಡಂ ನಿಮಗೊಂದು ಸಂತೋಷದ ಸುದ್ದಿ ನಿಮಗೆ ಕಣ್ಣು ಆಪರೇಷನ್ ಆಗುತ್ತೆ ನಿಮಗೆ ಮತ್ತೆ ದೃಷ್ಟಿ ಬರುತ್ತೆ. " ಎಂದರು. ಗೌರಿಗೆ ಎಲ್ಲಿಲ್ಲದ ಸಂತೋಷ ಗೆಳತಿಯೊಡನೆ ಅಂದೆ ಆಸ್ಪತ್ರೆಗೆ ಅಡ್ಮಿಟ್ ಆದಳು. ದೇವರ ದಯೆಯಿಂದ ಗೌರಿಗೆ ದೃಷ್ಟಿ ಬಂತು.
...................................................
ಅದೋಂದು ದಿನ ಗೌತಮ್ ಗಾಗಿ ಗೌರಿ ಅದೇ ಪಾರ್ಕಿನಲ್ಲಿ ತನ್ನ ಜೀವದ ಗೆಳೆಯನಿಗಾಗಿ ಕಾದು ಕೂತಳು. ಅವನಿಗೆ ಸರ್ಪ್ರೈಸ್ ಕೋಡಲೆಂದು ತನಗೆ ಆಪರೇಷನ್ ಆದ ಸುದ್ದಿಯನ್ನು ಹೇಳಿರಲಿಲ್ಲ. ಮರುಕ್ಷಣದಲ್ಲಿ ಅಲ್ಲಿಗೆ ಬಂದ ಗೌತಮ್ ನನ್ನು ಕಂಡು ಅವಳಿಗೆ ದಿಭ್ರಮೆ ಯಾಯಿತು. ತಾನು ಅನುಭವಿಸಿದ ಅಂಧತ್ವ ವನ್ನು ಈಗ ಗೌತಮ್ ಅನುಭವಿಸುತ್ತಿದ್ದಾನೆ ಎಂದು ತಿಳಿದ ಅವಲು ಅವನನ್ನು ದೂರ ಮಾಡಿಅದಳು. ಇದು ಅವಳ ಸ್ವಾರ್ಥವೋ ಅಥವಾ ಅವ್ಳು ಅನುಭವಿಸಿದ ಕಷಟಗಳನ್ನು ನೆನೆದು ಈ ನಿರ್ಧಾರ ತೆಗೆದುಕೋಂಡಳೊ ಗೊತ್ತಿಲ್ಲ. ಅಂತೂ ಅಲ್ಲಿಗೆ ಅವರಿಬ್ಬರ ಆ ಪ್ರೀತಿಯ ಕೊಂಡಿ ಕಳಚಿ ಬಿತ್ತು..
...................................................
ಗೌತಮ್ ಎಷ್ಟೆ ಗೋಗರೆದರೂ ಗೌರಿ ತನ್ನ ನಿರ್ಧಾರ ವನ್ನು ಬದಲಿಸಲಿಲ್ಲ. ಅದೋಂದು ದಿನ ಗೌತಮ್ ಅವಳಿಗಾಗಿ ಪಾರ್ಕಿನಲ್ಲಿ ಕಾಯುತ್ತಿರುವಾಗ ಅಲ್ಲಿಗೆ ಬಂದ ಗೌರಿ ಹೇಳುತ್ತಾಳೆ "ನಾನು ಸಂತೋಷವಾಗಿರಬೇಕೆಂದು ನೀನು ಬಯಸುವದಾದರೆ, ನನ್ನ ಜೀವನದಿಂದ......... ನನ್ನ ಮನಸಿನಿಂದ ............. ದೂರ ಹೋಗಿಬಿಡು" ಎನ್ನುತ್ತಾಳೆ. ಅವಳ ಮಾತನ್ನು ಕೇಳಿದ ಗೌತಮ್ " ಗೌರಿ ನನಗೆ ನಿನ್ನ ಸಂತೋಷಕ್ಕಿಂತ ಹೆಚ್ಚಿನದೇನಿದೆ? ನಿಇನು ಹೇಲಿದಂತೆ ನಾನು ನಿನ್ನಿಂದ ದೂರ ಹೋಗುತ್ತೇನೆ" ಎಂದು ಹೇಳಿ ಕಣ್ಣಿಲ್ಲದ ಕಣ್ಣಲ್ಲಿ ನೀರು ಸುರಿಸುತ್ತಾ ಹೋಗುತ್ತನೆ. ಹೋಗುವಾಗ ಕೊನೆಯದ್ದಗಿ ಹೇಳುತ್ತಾನೆ " ಗೌರಿ ನಾನು ಅಂದು ನಿನಗೆ ನೀಡಿದ ಮಾತನ್ನು ನೆಡೆಸಿಕೊಟ್ಟಿದ್ದೇನೆ"(ಗೌರಿ, ನೀನು ಯಾವತ್ತು ದ್ರುಷ್ಟಿಹೀನಳಲ್ಲ. ಎಕೆಂದರೆ ನಿನ್ನ ಕಣ್ಣಾಗಿ ನಾನಿರುವೆ). ನೀ ಎಲೇ ಇರು ಹೇಗೆ ಇರು ಚೆನ್ನಗಿರು........ ಹಾಗೆ "ಪ್ಲೀಸ್ ಟೇಕ್ ಕೇರ್ ಆಫ್ ಮೈ ಆಯಿಸ್".
...................................................
ಘೌತಮ್ ಹೇಳಿದ ಕೊನೆಯ ಮಾತನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಗೌರಿಯ ಮುಂದಿದ್ದ ಗೌತಮ್ ಹೊರಟು ಹೋಗಿದ್ದ. ಅವನನ್ನೆ ನೋಡುತ್ತ ನಿಂತ ಗೌರಿಯ ಅಲ್ಲ............ ಗೌತಮ್ ನ ಕಣ್ಣಲ್ಲಿ ನೀರು ಸುರಿಯುತ್ತಿತ್ತು.....

Thursday, May 7, 2009

ನಾ ಕಂಡ ಅಪರೂಪದ ಚೆಲುವೆ


ಸಮಯ ಸಾಯಂಕಾಲ ೬ ಘಂಟೆ ನಾನು ಎಂದಿನಂತೆ ಕೆಲಸ ಮುಗಿಸಿ ಜಯನಗರದ ಬಸ್ ಸ್ಟಾಪ್ ನಲ್ಲಿ ನಿಂತಿದ್ದೆ. ಕೆಲಸದ ಜಂಜಾಟವನ್ನು ಮುಗಿಸಿ ನಿಂತ ನನ್ನ ಕಣ್ಣುಗಳು ಸೊತು ಸೊರಗಿದ್ದರು ಅಲ್ಲಿಗೆ ಬರುವ ಬಸ್ಸಿನ ಬೊರ್ಡನ್ನೆ ನೊಡುತ್ತಿತ್ತು. ಬರುವ ಎಲ್ಲಾ ಬಸ್ಸುಗಳಿಗೆ ಯಾವಗಲಾದರೊಮ್ಮೆ ಬೆಲ್ಲ ಸಿಗುವ ಇರುವೆಗಳಂತೆ ಜನರು ಮುಗಿ ಬೀಳುತ್ತಿದ್ದಾರೆ. ಕೊನೆಗು ನಾ ಕಾಯುತ್ತಿರುವ ಬಸ್ ಬಂದಾಯ್ತು, ಹಾಗು ಹೀಗು ಹರ ಸಾಹಸ ಮಾಡಿ ಬಸ್ಸನ್ನೆರಿದೆ. ದಿನದಂತೆ ಆ ಕಂಡಕ್ಟರ್ ನ ಮಂತ್ರ ಕಿವಿಯನ್ನು ಕೊರೆಯುತ್ತಿತ್ತು, ಅದೆ ಒಳಗೆ ಬನ್ನಿ, ಒಳಗೆ ಬನ್ನಿ, ಅಂತ. ಬಸ್ಸಿನಲ್ಲಿ ಆ ಎಲ್ಲಾ ಜನರ ಬೆವರಿನ ವಾಸನೆ, ಮತ್ತು ಬಸ್ಸನ್ನು ಹರಡಿರುವ ಎಲ್ಲಾ ಕೆಟ್ಟ ವಾಸನೆಯನ್ನು ಅಲ್ಲೆ ಇದ್ದ ನಮ್ಮ ಒಬ್ಬ ಮುಸ್ಲಿಂ ಬಾಂಧವರ ಘಮ ಘಮ ಸೆಂಟಿನ ವಾಸನೆಯು ಮುಚ್ಚಿ ಹಾಕುತ್ತಿತ್ತು. ಸ್ವಲ್ಪ ಹೊತ್ತು ಹಾಗೆ ಬಸ್ಸು ರೊಡಲ್ಲಿ ಬರುವ ಮತ್ತು ಹೊಗುವ ಸಣ್ಣ ಸಣ್ಣ ವಾಹನಗಳನ್ನು ಸರಿಸುತ್ತ ಹಾಗೆ ರೊಡನ್ನು ಭೆಧಿಸಿಕೊಂಡು ಹೊಯಿತು. ಅಂತು ಇಂತು ಬಸ್ಸ್ ನಲ್ಲಿ ಕೊನೆಗು ನನಗು ಒಂದು ನೆಲೆ ಅಂದರೆ ಸೀಟು ಸಿಕ್ಕಿತು. ನಾನು ಕುಳಿತ ಸೀಟು ಲೇಡೀಸ್ ಸೀಟ್ ನ ಕೊನೆಯ ಸೀಟಿನ ಹಿಂದಿನದ್ದು. ಎಂದಿನಂತೆ ನನ್ನ ಕಣ್ಣು ಒಂದು ಸುಂದರ ಹುಡುಗಿಗಾಗಿ ಹುಡುಕುತ್ತಿತ್ತು, ಅದೆ ಸಮಯಕ್ಕೆ ನನ್ನ ಪಕ್ಕಕ್ಕೆ ಯಾರೊ ಬ್ಂದು ಕುಳಿತಂತಾಯ್ತು, ಹಾಗೆ ಒಮ್ಮೆ ನನ್ನ ಕಣ್ಣು ಆ ಕ್ಡೆ ತಿರುಗಿತು, ಹಾಗೆ ಒಂದು ಕಿರು ನಗೆಯನ್ನು ಬೀರಿದ ಅವಳು ನನ್ನ ಹ್ರುದಯಕ್ಕೆ ಲಗ್ಗೆ ಹಾಕಿದಳು. ಕಿಟಕಿಯಿಂದ ಬರುವ ಗಾಳಿಯಿಂದ ಅವಳ ಮಾತೆ ಕೇಳದೆ ಎಲ್ಲೆಂದರಲ್ಲಿ ಹಾರಾಡುತ್ತಿದ್ದ ಅವಳ ಆ ಮುಂಗುರುಳು ನನ್ನನ್ನು ಬೆರೊಂದು ಲೋಕಕ್ಕೆ ಕರೆದೋಯ್ತು. ಅವಳ ಕಣ್ಣಲ್ಲಿದ್ದ ಆ ಮುಗ್ದತೆ ನನ್ನನ್ನು ಮೂಕನನ್ನಾಗಿ ಮಾಡಿತ್ತು. ಸುಮಾರು ಅರ್ಧ ಘಂಟೆಯಲ್ಲಿ ಬಸ್ಸು ಮೈಸೂರು ರೋಡ್ ಗೆ ಬಂತು. ಆ ಅರ್ಧ ಘಂಟೆಯಲ್ಲಿ ಅವಳು ನನ್ನ ಮನಸನ್ನೆ ಕದ್ದುಬಿಟ್ಟಳು. ಅವಳ ಆ ವಿಶಾಲವಾದ ಕಣ್ಣು, ಹಾಲಿನ ಬಣ್ಣದಂತಿದ್ದ ಆ ಕೆನ್ನೆಯ ಮೇಲೆ ಹಾಗೆ ಒಮ್ಮೆ ಹರಿದು ಬರಬೆಕೆಂಬ ಆಸೆಯನ್ನು ಹುಟ್ಟಿಸುತ್ತಿತ್ತು. ಅದೆ ಸಮಯಕ್ಕೆ ನಮ್ಮ ಬಸ್ ಡ್ರೈವರ್ ಮಹಾಶಯ ಬ್ರೇಕ್ ಒತ್ತಿದ ಹಾಗೆ ಅವಳ ಚಂದ್ರನಂತ ಅವಳ ಆ ಮುಖ ನನ್ನ ಹೆಗಲ ಮೇಲೆ ಬಿತ್ತು, ಆಹಾ ಅಹಾಃಃ ನಾನು ಮಾತ್ರ ಎಲ್ಲೊ ಕಳೆದುಹೊದ ಹಾಗಾಯ್ತು, ಹಾಗೆ ನನ್ನನ್ನೆ ನೊಡುತ್ತಾ ಕಣ್ ಸನ್ನೆಯಲ್ಲೆ ಮತ್ತೊಮ್ಮೆ ಹಾಯ್ ಎಂದಳು. ಬಸ್ ನಲ್ಲಿರುವ ಎಲ್ಲ ಹುಡುಗಿಯರ ಮಧ್ಯೆ ಅವಳೊಂದು ಬರಡಾದ ಬಂಜರಲ್ಲಿ ಬೆಳೆದು ನಿಂತ ಹೂವಿನ ಗಿಡದಲ್ಲಿನ ಕೆಂಪು ಗುಲಾಬಿಯಂತೆ ಕಂಗೊಳಿಸುತ್ತಿದ್ದಳು. ಸಮಯ ಸುಮಾರು ೬.೪೦ ಆಗಿತ್ತು. ಜನರನ್ನೆಲ್ಲಾ ಹೊತ್ತ ಬಸ್ಸು ವಿಜಯನಗರಕ್ಕೆ ಬಂದು ನಿಂತಿತು. ಅಂದೆಕೊ ಬಸ್ಸು ಬೇಗ ಬಣ್ದ ಹಾಗೆ ಅನ್ನಿಸಿತು, ಆದರೆ ವಾಚ್ ನೊಡಿದಾಗ ಸರಿಯಗಿಯೆ ಇತ್ತು. ಅಂತು ನನ್ನ ಕಣ್ಣ ತುಂಬ ಅವಳನ್ನೆ ತುಂಬಿಕೊಂಡು ಇನ್ನೇನು ಬಸ್ ಇಳಿಯಬೇಕು ಎನ್ನುವಷ್ಟರಲ್ಲಿ ಯಾರೊ ನನ್ನ ಮುಟ್ಟಿದಂತಾಯ್ತು, ಯಾರೆಂದು ತಿರುಗಿ ನೋಡುವಷ್ತರಲ್ಲಿ ಅದೇ ಚೆಲುವೆ ಮತ್ತೊಮ್ಮೆ ಣೊಡಿ ನಕ್ಕಳು, ಪಕ್ಕದಲ್ಲಿದ್ದ ಒಬ್ಬ ಹೆಂಗಸು ಅವಳಿಗೆ ಹೆಳಿದರು.." ಪುಟ್ಟಾ.. ಅಂಕಲ್ ಗೆ ಟಾಟಾ ಮಾಡು.." ಅವಳು ತನ್ನ ಆ ಪುಟ್ಟ ಕೊಮಲ ಕೈಗಳಿಂದ ಟಾಟಾ ಎಂದು ಹೇಳಿದಾಗ ಅವಳ ಮುಖದಲ್ಲಿದ್ದ ಆ ಮುಗ್ಧ ನಗುವನ್ನೆ ನೆನೆಯುತ್ತ ಮನೆಯ ದಾರಿ ಹೊರಟೆ..