Thursday, May 7, 2009

ನಾ ಕಂಡ ಅಪರೂಪದ ಚೆಲುವೆ


ಸಮಯ ಸಾಯಂಕಾಲ ೬ ಘಂಟೆ ನಾನು ಎಂದಿನಂತೆ ಕೆಲಸ ಮುಗಿಸಿ ಜಯನಗರದ ಬಸ್ ಸ್ಟಾಪ್ ನಲ್ಲಿ ನಿಂತಿದ್ದೆ. ಕೆಲಸದ ಜಂಜಾಟವನ್ನು ಮುಗಿಸಿ ನಿಂತ ನನ್ನ ಕಣ್ಣುಗಳು ಸೊತು ಸೊರಗಿದ್ದರು ಅಲ್ಲಿಗೆ ಬರುವ ಬಸ್ಸಿನ ಬೊರ್ಡನ್ನೆ ನೊಡುತ್ತಿತ್ತು. ಬರುವ ಎಲ್ಲಾ ಬಸ್ಸುಗಳಿಗೆ ಯಾವಗಲಾದರೊಮ್ಮೆ ಬೆಲ್ಲ ಸಿಗುವ ಇರುವೆಗಳಂತೆ ಜನರು ಮುಗಿ ಬೀಳುತ್ತಿದ್ದಾರೆ. ಕೊನೆಗು ನಾ ಕಾಯುತ್ತಿರುವ ಬಸ್ ಬಂದಾಯ್ತು, ಹಾಗು ಹೀಗು ಹರ ಸಾಹಸ ಮಾಡಿ ಬಸ್ಸನ್ನೆರಿದೆ. ದಿನದಂತೆ ಆ ಕಂಡಕ್ಟರ್ ನ ಮಂತ್ರ ಕಿವಿಯನ್ನು ಕೊರೆಯುತ್ತಿತ್ತು, ಅದೆ ಒಳಗೆ ಬನ್ನಿ, ಒಳಗೆ ಬನ್ನಿ, ಅಂತ. ಬಸ್ಸಿನಲ್ಲಿ ಆ ಎಲ್ಲಾ ಜನರ ಬೆವರಿನ ವಾಸನೆ, ಮತ್ತು ಬಸ್ಸನ್ನು ಹರಡಿರುವ ಎಲ್ಲಾ ಕೆಟ್ಟ ವಾಸನೆಯನ್ನು ಅಲ್ಲೆ ಇದ್ದ ನಮ್ಮ ಒಬ್ಬ ಮುಸ್ಲಿಂ ಬಾಂಧವರ ಘಮ ಘಮ ಸೆಂಟಿನ ವಾಸನೆಯು ಮುಚ್ಚಿ ಹಾಕುತ್ತಿತ್ತು. ಸ್ವಲ್ಪ ಹೊತ್ತು ಹಾಗೆ ಬಸ್ಸು ರೊಡಲ್ಲಿ ಬರುವ ಮತ್ತು ಹೊಗುವ ಸಣ್ಣ ಸಣ್ಣ ವಾಹನಗಳನ್ನು ಸರಿಸುತ್ತ ಹಾಗೆ ರೊಡನ್ನು ಭೆಧಿಸಿಕೊಂಡು ಹೊಯಿತು. ಅಂತು ಇಂತು ಬಸ್ಸ್ ನಲ್ಲಿ ಕೊನೆಗು ನನಗು ಒಂದು ನೆಲೆ ಅಂದರೆ ಸೀಟು ಸಿಕ್ಕಿತು. ನಾನು ಕುಳಿತ ಸೀಟು ಲೇಡೀಸ್ ಸೀಟ್ ನ ಕೊನೆಯ ಸೀಟಿನ ಹಿಂದಿನದ್ದು. ಎಂದಿನಂತೆ ನನ್ನ ಕಣ್ಣು ಒಂದು ಸುಂದರ ಹುಡುಗಿಗಾಗಿ ಹುಡುಕುತ್ತಿತ್ತು, ಅದೆ ಸಮಯಕ್ಕೆ ನನ್ನ ಪಕ್ಕಕ್ಕೆ ಯಾರೊ ಬ್ಂದು ಕುಳಿತಂತಾಯ್ತು, ಹಾಗೆ ಒಮ್ಮೆ ನನ್ನ ಕಣ್ಣು ಆ ಕ್ಡೆ ತಿರುಗಿತು, ಹಾಗೆ ಒಂದು ಕಿರು ನಗೆಯನ್ನು ಬೀರಿದ ಅವಳು ನನ್ನ ಹ್ರುದಯಕ್ಕೆ ಲಗ್ಗೆ ಹಾಕಿದಳು. ಕಿಟಕಿಯಿಂದ ಬರುವ ಗಾಳಿಯಿಂದ ಅವಳ ಮಾತೆ ಕೇಳದೆ ಎಲ್ಲೆಂದರಲ್ಲಿ ಹಾರಾಡುತ್ತಿದ್ದ ಅವಳ ಆ ಮುಂಗುರುಳು ನನ್ನನ್ನು ಬೆರೊಂದು ಲೋಕಕ್ಕೆ ಕರೆದೋಯ್ತು. ಅವಳ ಕಣ್ಣಲ್ಲಿದ್ದ ಆ ಮುಗ್ದತೆ ನನ್ನನ್ನು ಮೂಕನನ್ನಾಗಿ ಮಾಡಿತ್ತು. ಸುಮಾರು ಅರ್ಧ ಘಂಟೆಯಲ್ಲಿ ಬಸ್ಸು ಮೈಸೂರು ರೋಡ್ ಗೆ ಬಂತು. ಆ ಅರ್ಧ ಘಂಟೆಯಲ್ಲಿ ಅವಳು ನನ್ನ ಮನಸನ್ನೆ ಕದ್ದುಬಿಟ್ಟಳು. ಅವಳ ಆ ವಿಶಾಲವಾದ ಕಣ್ಣು, ಹಾಲಿನ ಬಣ್ಣದಂತಿದ್ದ ಆ ಕೆನ್ನೆಯ ಮೇಲೆ ಹಾಗೆ ಒಮ್ಮೆ ಹರಿದು ಬರಬೆಕೆಂಬ ಆಸೆಯನ್ನು ಹುಟ್ಟಿಸುತ್ತಿತ್ತು. ಅದೆ ಸಮಯಕ್ಕೆ ನಮ್ಮ ಬಸ್ ಡ್ರೈವರ್ ಮಹಾಶಯ ಬ್ರೇಕ್ ಒತ್ತಿದ ಹಾಗೆ ಅವಳ ಚಂದ್ರನಂತ ಅವಳ ಆ ಮುಖ ನನ್ನ ಹೆಗಲ ಮೇಲೆ ಬಿತ್ತು, ಆಹಾ ಅಹಾಃಃ ನಾನು ಮಾತ್ರ ಎಲ್ಲೊ ಕಳೆದುಹೊದ ಹಾಗಾಯ್ತು, ಹಾಗೆ ನನ್ನನ್ನೆ ನೊಡುತ್ತಾ ಕಣ್ ಸನ್ನೆಯಲ್ಲೆ ಮತ್ತೊಮ್ಮೆ ಹಾಯ್ ಎಂದಳು. ಬಸ್ ನಲ್ಲಿರುವ ಎಲ್ಲ ಹುಡುಗಿಯರ ಮಧ್ಯೆ ಅವಳೊಂದು ಬರಡಾದ ಬಂಜರಲ್ಲಿ ಬೆಳೆದು ನಿಂತ ಹೂವಿನ ಗಿಡದಲ್ಲಿನ ಕೆಂಪು ಗುಲಾಬಿಯಂತೆ ಕಂಗೊಳಿಸುತ್ತಿದ್ದಳು. ಸಮಯ ಸುಮಾರು ೬.೪೦ ಆಗಿತ್ತು. ಜನರನ್ನೆಲ್ಲಾ ಹೊತ್ತ ಬಸ್ಸು ವಿಜಯನಗರಕ್ಕೆ ಬಂದು ನಿಂತಿತು. ಅಂದೆಕೊ ಬಸ್ಸು ಬೇಗ ಬಣ್ದ ಹಾಗೆ ಅನ್ನಿಸಿತು, ಆದರೆ ವಾಚ್ ನೊಡಿದಾಗ ಸರಿಯಗಿಯೆ ಇತ್ತು. ಅಂತು ನನ್ನ ಕಣ್ಣ ತುಂಬ ಅವಳನ್ನೆ ತುಂಬಿಕೊಂಡು ಇನ್ನೇನು ಬಸ್ ಇಳಿಯಬೇಕು ಎನ್ನುವಷ್ಟರಲ್ಲಿ ಯಾರೊ ನನ್ನ ಮುಟ್ಟಿದಂತಾಯ್ತು, ಯಾರೆಂದು ತಿರುಗಿ ನೋಡುವಷ್ತರಲ್ಲಿ ಅದೇ ಚೆಲುವೆ ಮತ್ತೊಮ್ಮೆ ಣೊಡಿ ನಕ್ಕಳು, ಪಕ್ಕದಲ್ಲಿದ್ದ ಒಬ್ಬ ಹೆಂಗಸು ಅವಳಿಗೆ ಹೆಳಿದರು.." ಪುಟ್ಟಾ.. ಅಂಕಲ್ ಗೆ ಟಾಟಾ ಮಾಡು.." ಅವಳು ತನ್ನ ಆ ಪುಟ್ಟ ಕೊಮಲ ಕೈಗಳಿಂದ ಟಾಟಾ ಎಂದು ಹೇಳಿದಾಗ ಅವಳ ಮುಖದಲ್ಲಿದ್ದ ಆ ಮುಗ್ಧ ನಗುವನ್ನೆ ನೆನೆಯುತ್ತ ಮನೆಯ ದಾರಿ ಹೊರಟೆ..

No comments:

Post a Comment